ಚಿತ್ರದುಗ೯ ಜಿಲ್ಲೆಯ ಹೊಳಲ್ಕೆರೆಯಲ್ಲಿ ೩೦.೦೫.೧೯೩೫ರಲ್ಲಿ ಜನಿಸಿದರು. ಶ್ರೀ ಎಚ್.ವಿ.ರಂಗರಾವ್ ಮತ್ತು ರಂಗಮ್ಮ ಎಂಬ ದಂಪತಿಗಳ ಮಗ ಇವರು.ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯದ್ಯಂತ ಉಪನ್ಯಾಸಗಳನ್ನು ನೀಡಿದ್ದಾರೆ. == ಶಿಕ್ಷಣ == ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಪಡೆದರು. == ಕೆಲಸ == ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. == ಕೃತಿಗಳನ್ನು == ಕಲಾಂ ಮೇಷ್ಟ್ರು ಡಾ.ಸುಬ್ರ್ಮಣ್ಯನ್ ಚಂದ್ರಶೇಖರ್ ಸರ್ ಐಸಾಕ್ ನ್ಯೂಟನ್ ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ ಅಂತರಿಕ್ಷ ಚಂದ್ರಯಾನ ಬಿಗ್ ಬ್ಯಾಂಗ್ ಪ್ರಳಯ-೨೦೧೨ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರು ಕನ್ನಡ ಪುಸ್ತಕಾಭಿವೃದ್ಧಿ ಪ್ರಾಧಿಕಾರಕ್ಕಾಗಿ ರಚಿಸಿಕೊಟ್ಟಿರುವ 'ಕಲಾಂ ಮೇಷ್ಟ್ರು' ಕೃತಿಯಿಂದ ಪ್ರಸ್ತುತ 'ಬದುಕನ್ನು ಪ್ರಿತಿಸಿದ ಸಂತ' ಎಂಬ ಲೇಖನವನ್ನು ಸ್ವೀಕರಿಸಲಾಗಿದೆ.